ಸೋಮವಾರ, ಜೂನ್ 13, 2016

ಎಡಕಲ್ಲು ಗುಡ್ಡದ ಮೇಲೆ


  ಆರತಿ ಮತ್ತು ಜಯಂತಿ ಜೊತೆಯಾಗಿ ನಟಿಸಿದ ಚಿತ್ರ ‘ಎಡಕಲ್ಲು ಗುಡ್ಡದ ಮೇಲೆ’. ಒಂದು ರೊಮ್ಯಾಂಟಿಕ್ ಕಥಾ ಹಂದರವನ್ನು ಹೊಂದಿರುವ ಚಿತ್ರ. ಆಕಸ್ಮಿಕವಾಗಿ ಮಾಡಿದ ತಪ್ಪಿನಿಂದಾಗ ಮಾನಸಿಕ ತಳಮಳಕ್ಕೆ ಒಳಗಾಗುವ ಮಾಧವಿ ಪಾತ್ರದಲ್ಲಿ ಜಯಂತಿ ಅಭಿನಯ ನಿಜಕ್ಕೂ ಅದ್ಬುತವಾಗಿ ಮೂಡಿ ಬಂದಿದೆ. ಮಾಧವಿ ತಂಗಿಯ ಪಾತ್ರದಲ್ಲಿ ಆರತಿ, ದೇವಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ನಟನೆ ಚಿತ್ರಕ್ಕೆ ಹಾಕಿದ ತೋರಣದಂತೆ ಇದೆ.

 ಅದ್ಬುತ ಚಿತ್ರಗಳ ನಿರ್ದೇಶನಕ್ಕೆ ಹೆಸರಾದ ಕನ್ನಡದ ಸೃಜನಶೀಲ ನಿರ್ದೇಶಕ ‘ಪುಟ್ಟಣ್ಣ ಕಣಗಾಲ್’, ಇವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರವೇ ಎಡಕಲ್ಲಿ ಗುಟ್ಟದ ಮೇಲೆ. ಕಥೆ, ಚಿತ್ರಕಥೆ, ಸಂಭಾಷಣೆಯ ವಿಚಾರದಲ್ಲಿ ಈ ಚಿತ್ರದ ಪೂರ್ಣವಾದ ಚಿತ್ರಣವನ್ನ ನೀಡುತ್ತೆ. ವಿಭಿನ್ನ ಕಥಾ ಹಂದರ ಈ ಚಿತ್ರದಲ್ಲಿ ಕಾಣಬಹುದು. ಮುಖ್ಯವಾಗಿ ಇಲ್ಲಿ ನಾಯಕಿಗೆ ಹೆಚ್ಚಿನ ಪ್ರಾದಾನ್ಯತೆಯನ್ನ ನೀದಲಾಗಿದೆ.
 ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಎಂ. ರಂಗರಾವ್, ಈ ಚಿತ್ರದಲ್ಲಿ  ಒಟ್ಟು 8 ಹಾಡುಗಳಿವೆ. ಆರ್.ಎನ್ ಜಯಗೋಪಾಲ್, ಕೆ ಪ್ರಭಾಕರ ಶಾಸ್ತ್ರಿ, ವಿಜಯ ನಾರಸಿಂಹ, ಎಂ ನರೇಂದ್ರಬಾಬು ಹಾಡುಗಳಿಗೆ ಸಾಹಿತ್ಯವನ್ನ ಬರೆದಿದ್ದಾರೆ. ಎಸ್ ಜಾನಕಿ, ಪಿ ಸುಶೀಲ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಚಿತ್ರದ ಹಾಡುಗಳಿಗೆ ತಮ್ಮ ಗಾನ ಕಂಠವನ್ನು ನೀಡಿದ್ದಾರೆ. ಕೇಳಲು ಹಾಡುಗಳು ತಲೆತೂಗುವಂತೆ ಮಾಡುತ್ತವೆ.
 ಭಾರತೀಸುತ ಬರೆದಿರುವ ಅನೇಕ ಕಾದಂಬರಿಗಳು ತೆರೆ ಮೇಲೆ ರಾರಾಜಿಸಿದ್ದನ್ನ ಕಾಣಬಹುದು. ಅದರಲ್ಲಿ ಎಡಕಲ್ಲು ಗುಡ್ಡದ ಮೇಲೆ ಚಲನಚಿತ್ರವೂ ಕೂಡ ಒಂದು. ಇವರು ಬರೆದಿರುವ ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯನ್ನು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಚಿತ್ರವನ್ನಾಗಿ ಮಾಡಿದ್ದಾರೆ. ಕಾದಂಬರಿ ಓದುವುದರಿಂದ ಆಗುಂವತಹ ಅನುಭವ ಈ ಚಿತ್ರವನ್ನು ನೋಡಿದಾಗ ಸಿಗುವಂತಹ ಅನುಭವ ಎರಡು ಒಂದೇ ಎಂದರೆ ತಪ್ಪಾಗಲಾರದು. ಇದು ಚಿತ್ರ ನಿರ್ದೇಶನಕ್ಕೆ ಹಿಡಿದ ಕನ್ನಡಿ.
 ಕೇರಳದ ವೈನಾಡು ಜಿಲ್ಲೆಯಲ್ಲಿರುವ ಎಡಕಲ್ಲು ಒಂದು ಸುಂದರವಾದ ಪ್ರವಾಸಿ ತಾಣ, ಮತ್ತು ಕೊಡಗು ಪ್ರದೇಶಗಳಿಗೆ ಹತ್ತಿರವಿರುವ ಪ್ರೇಕ್ಷಣೀಯ ಸ್ಥಳ. ಇಂತ ಸ್ಥಳಗಳನ್ನು ತಮ್ಮ ಕ್ಯಾಮರ ಕಣ್ಣಿನ ಮೂಲಕ ಅದ್ಬುತವಾಗಿ ಸೆರೆಹಿಡಿದಿದ್ದಾರೆ ಎಸ್.ವಿ. ಶ್ರೀಕಾಂತ್, ಎಸ್.ಪಿ.ಎನ್ ಕೃಷ್ಣ ಮತ್ತು ಟಿ.ಪಿ. ವೇಲಾಯುದಮ್ ಉತ್ತಮವಾದ ಸಂಕಲನದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದನ್ನ ಚಿತ್ರದಲ್ಲಿ ನೋಡಿ ಸವಿಯಬೇಕು.
 ಜಯಂತಿ ಮತ್ತು ಆರತಿಯಲ್ಲದೆ ಚಂದ್ರಶೇಖರ್, ರಂಗ, ಶಿವರಾಂ ಅಭಿನಯ ಚಿತ್ರದಲ್ಲಿ ಸುಂದರವಾಗಿ ಮೂಡಿಬಂದಿದೆ. ಎಷ್ಟೂ ನೋಡಿದರು ನೋಡಲೇ ಬೇಕೆನ್ನುವ ಸುಂದರ ಹಾಡುಗಳು ಚಿತ್ರವನನ್ನು ನೋಡುವಂತೆ ಮಾಡುತ್ವೆ.
ಮಂಜುನಾಥ್ ಹೆಚ್.ಆರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ