ಶನಿವಾರ, ಮೇ 28, 2016

ಅಂಜದ ಗಂಡು



  ರವಿಚಂದ್ರನ್ ಕೇವಲ ಒಂದು ಪಾತ್ರಕ್ಕೆ ಸೀಮಿತವಾದ ನಟರಲ್ಲ, ಹೆಚ್ಚು ಪಾತ್ರಗಳಲ್ಲಿ ಲವ್ವರ್ ಬಾಯ್ ಆಗಿ ಕಂಡವರು, ಕ್ರಮೇಣದಲ್ಲಿ ತಾಯಿ ಮಗನ ಸೆಂಟಿಮೆಂಟ್ ಪಾತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಶ್ರೀಮಂತನ ಮಗನಾಗಿ ಬಡತನದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಅಪ್ಪನ ಬಳಿ ಚಾಲೆಂಜ್ ಮಾಡಿ ಹೊರಡುವ ಅಂಜದಗಂಡು ಚಿತ್ರ, ಇವರ ಅಭಿನಯದ ಬ್ಲಾಕ್‍ಬಸ್ಟರ್ ಚಿತ್ರಗಳಲ್ಲೊಂದು.
  1988ರಲ್ಲಿ ತೆರೆಕಂಡ ಅಂಜದಗಂಡು ಚಿತ್ರದ ಮೂಲ ತಮಿಳಿನ ‘ತಂಬಿಕ್ಕು ಎಂತ ಊರು’ ಚಿತ್ರದ ಕನ್ನಡ ಅವತರಣಿಕೆ. ತಮಿಳಿನಲ್ಲಿ ರಜನಿಕಾಂತ್ ಮತ್ತು ಮಾಧವಿ ಅಭಿನಯಿಸಿದ್ರೆ ಕನ್ನಡದಲ್ಲಿ ರವಿಚಂದ್ರನ್ ಮತ್ತು ಖುಷ್ಬು ಕಾಣಿಸಿಕೊಂಡಿದ್ದರು, ತಮಿಳಿನ ಈ ಚಿತ್ರ 1984ರಲ್ಲಿ ತೆರೆಕಂಡು ಭರ್ಜರಿ ಯಶಸ್ಸನ್ನ ಕೂಡ ಕಂಡಿತ್ತು.
  ಅಂಜದಗಂಡು ಚಿತ್ರ ನಿರ್ದೇಶನವನ್ನು ಮಾಡಿದವರು ರೇಣುಕ ಶರ್ಮ, ಇವರೇ ಇದಕ್ಕೆ ಚಿತ್ರಕಥೆ ಕೂಡ ಬರೆದಿದ್ದಾರೆ, ರವಿಚಂದ್ರನ್ ಮತ್ತು ಖುಷ್ಬು ಜೊತೆಗೆ ತೂಗುದೀಪ ಶ್ರೀನಿವಾಸ್ ಮತ್ತು ಮಾಸ್ಟರ್ ಮಂಜುನಾಥ್ ಚಿತ್ರದಲ್ಲಿ ಅಭಿನಯಿಸಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇವರ ಅದ್ಬುತ ನಟನೆಯಿಂದ ಕನ್ನಡ ಪ್ರೇಕ್ಷರನ್ನು ತಲುಪಿತ್ತು. ಆಗ ಇದೊಂದು ಹೊಸ ಟ್ರೆಂಡ್ ಆಗಿ ಬದಲಾವಣೆಯನ್ನ ಕಂಡಿತ್ತು.
  ರವಿಚಂದ್ರನ್ ಬಹುತೇಕ ಚಿತ್ರಗಳಿಗೆ ಸಂಗೀತ ನೀಡಿರುವುದು ಹಂಸಲೇಖ, ಅಂಜದಗಂಡು ಚಿತ್ರಕ್ಕೂ ಕೂಡ ಇವರೇ ಸಂಗೀತ ನೀಡಿದ್ದು, ಚಿತ್ರದ ಒಂದೊಂದು ಹಾಡುಗಳು ಹೊಸ ತೆರನಾಗಿ ಮೂಡಿಬಂದಿವೆ. ಚಿತ್ರದಲ್ಲಿ 7 ಹಾಡುಗಳಿದ್ದು ಎಸ್.ಪಿ ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್, ಬಿ.ಆರ್ ಛಾಯ, ಲತಾ ಹಂಸಲೇಖ, ರಮೇಶ್ ದ್ವನಿಯನ್ನು ನೀಡಿದ್ದಾರೆ.
  ಶ್ರೀಮಂತ ಕುಟುಂಬದ ಮಗನಾಗಿ ಹುಟ್ಟುವ ನಾಯಕ ಮನಬಂದಂತೆ ದುಂದು ವೆಚ್ಚವನ್ನು ಮಾಡ್ತನೆ ಇದನ್ನು ನೋಡಿದ ಅವನ ಅಪ್ಪಾ ಅವನಿಗೆ ಜವಾಬ್ದಾರಿ ಬರಲೆಂದು ಅವನ್ನು ಹಳ್ಳಿಗೆ ಕಳುಹಿಸ್ತಾರೆ, ಮುಂದೆ ಏನಾಗುತ್ತೆ ಅಂತ ಚಿತ್ರವನ್ನೇ ನೋಡ್ಬೇಕು. ರವಿಚಂದ್ರನ್ ಅಭಿನಯ ಬೇರೆ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ.

ಮಂಜುನಾಥ ಹೆಚ್. ಆರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ