ಮಂಗಳವಾರ, ಮೇ 31, 2016

ಅನಂತ್‍ನಾಗ್ ಮತ್ತು ಲಕ್ಷ್ಮಿ



ಎವರ್ ಗ್ರೀನ್ ಹಿಟ್ ಅನಂತ್‍ನಾಗ್ ಮತ್ತು ಲಕ್ಷ್ಮಿ ಜೋಡಿ
  ನ್ನಡ ಚಿತ್ರರಂಗದಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮಿ ಜೋಡಿ ಒಂದು ಟ್ರೆಂಡ್ ಸೃಷ್ಟಿ ಮಾಡಿತ್ತು. ಅವರ ಅಭಿನಯ, ಸಂಭಾಷಣೆ ಮತ್ತು ಅವರ ಕೆಮಿಸ್ಟ್ರಿ ಚಿತ್ರದಲ್ಲಿ ಅಷ್ಟು ಅದ್ಬುತವಾಗಿ ಮೂಡಿಬರುತ್ತಿತ್ತು. ಇವರು ಜೋಡಿಯಾಗಿ ನಟಿಸಿದ ಮತ್ತು ದೊರೈ ಭಗವಾನ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಬೆಂಕಿಯ ಬಲೆ. ಈ ಚಿತ್ರದಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮಿ ಅಭಿನಯವನ್ನು ಪ್ರೇಕ್ಷಕ ಪ್ರಭು ಮರೆಯುವಹಾಗಿಲ್ಲ. 
  ಬೆಂಕಿಯ ಬಲೆ ಚಿತ್ರ ಮೂಲತಃ ಇದೇ ಹೆಸರಿನ ಟಿ.ಎಸ್ ಸುಬ್ಬರಾವ್ ಬರೆದಿರುವ ಕಾದಂಬರಿ ಆಧಾರಿತವಾಗಿದೆ. ಕಾದಂಬರಿ ಅಂದರೆ ಕೇಳಬೇಕೆ. ಚಿತ್ರದ ಒಂದೊಂದು ದೃಶ್ಯವು ಕಾದಂಬರಿಯ ತೆರೆದ ಪುಟವಾಗಿರುತ್ತೆ. ಇನ್ನೂ ಈ ಚಿತ್ರದಲ್ಲಿ ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್ ಮೊದಲಾದವರು ನಟಿಸಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ಮತ್ತು ಆರ್. ಚಿಟ್ಟಿ ಬಾಬು ಛಾಯಾಗ್ರಹಣ ಚಿತ್ರಕ್ಕಿತ್ತು.
  ಶಂಕರ್‍ನಾಗ್, ರಮೇಶ್ ಭಟ್, ಮತ್ತು ಅರುಂಧತಿನಾಗ್ ಸಹ ನಟರಾಗಿ ಮತ್ತು ಅನಂತ್‍ನಾಗ್, ಲಕ್ಷ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಚಿತ್ರ ನೋಡಿ ಸ್ವಾಮಿ ನಾವಿರೋದು ಹೀಗೆ. ಈ ಚಿತ್ರವನ್ನ ಶಂಕರ್ ನಾಗ್ ನಿರ್ದೇಶನವನ್ನು ಮಾಡಿದ್ರೆ ರಮೇಶ್ ಭಟ್ ಬಂಡವಾಳವನ್ನ ಹೂಡಿದ್ರು. ಜಿ. ಕೆ ವೆಂಕಟೇಶ್ ಸಂಗೀತ ಚಿತ್ರದಲ್ಲಿ ಮೋಡಿ ಮಾಡಿತ್ತು. ಅನಂತ್‍ನಾಗ್ ಹಾಡುವ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡು ಇಂಪಾಗಿ ಮೂಡಿಬಂದಿದೆ.
  ಚಿತ್ರಲೇಖರವರ ಕಾದಂಬರಿ ಆಧಾರಿತ ಚಿತ್ರ ಮುದುಡಿದ ತಾವರೆ ಅರಳಿತು. ಲವ್ ಅಂಡ್ ರೊಮ್ಯಾಂಟಿಕ್ ಕಥೆ ಇರುವಂತಹ ಸಿನಿಮಾ. ಇದು ಕೆ.ವಿ ಜಯರಾಮ್ ನಿರ್ದೇಶನದಲ್ಲಿ 1983ರಲ್ಲಿ ಭರ್ಜರಿ ಯಶಸ್ಸು ಕಂಡಂತಹ ಚಿತ್ರ. ಲಕ್ಷ್ಮಿ ಮತ್ತು ಅಂನಂತ್‍ನಾಗ್ ಜೋಡಿ ಮೋಡಿ ಮಾಡಿದಂತಹ ಕಾಲ. ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಎಂ. ರಂಗರಾವ್, ಉಳಿದಂತೆ ಈ  ಚಿತ್ರದಲ್ಲಿ ಅಶ್ವತ್, ಶೋಭ, ಮುಖ್ಯಮಂತ್ರಿ ಚಂದ್ರು, ಲೀಲಾವತಿ, ಮೈಸೂರು ಲೋಕೇಶ್ ಮೊದಲಾದವರು ನಟಿಸಿದ್ದರು.
  ಲಕ್ಷ್ಮಿ ಮತ್ತು ಅನಂತ್‍ನಾಗ್ ಕಾಂಬಿನೇಷನ್‍ನ ಬೇರೆ ಚಿತ್ರಗಳಿಗೆ ಹೋಲಿಕೆ ಮಾಡಿದ್ರೆ ನಾ ನಿನ್ನ ಬಿಡಲಾರೆ ಒಂದು ವಿಭಿನ್ನವಾದ ಚಿತ್ರ, ಯಾಕೆಂದ್ರೆ ಬರಿ ಲವ್, ಸೆಂಟಿಮೆಂಟ್ ಚಿತ್ರಗಳಲ್ಲೇ ಅಭಿನಯಿಸುತಿದ್ದ ಈ ಜೋಡಿ ಪ್ರಥಮ ಭಾರಿಗೆ ಹಾರರ್ ಚಿತ್ರದಲ್ಲಿ ಕಾಣಿಸಿಕೊಂಡಿತ್ತು. ಈ ಚಿತ್ರವನ್ನ ನಿರ್ದೇಶನ ಮಾಡಿದ ವಿಜಯ್ ಅನಂತ್‍ನಾಗ್‍ರನ್ನ ಒಂದು ವಿಭಿನ್ನ ಪಾತ್ರದಲ್ಲಿ ತೋರಿಸಿದ್ದಾರೆ. ಮತ್ತು ಹಿನ್ನಲೆ ಸಂಗೀತ ಕೂಡ ಈ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ.
  ಅನಂತ್‍ನಾಗ್ ಮತ್ತು ಲಕ್ಷ್ಮಿ ಜೋಡಿ ಸ್ಯಾಂಡಲ್‍ವುಡ್‍ನಲ್ಲಿ ಒಂದು ಕಾಲದಲ್ಲಿ ಮೋಡಿ ಮಾಡಿತ್ತು ಅವರಿಬ್ಬರ ಅಭಿನಯ ಅವರಿಗೆ ಸಾಟಿ. ಇಂತ ಜೋಡಿಯನ್ನ ಬೀಟ್ ಮಾಡಲು ಇನ್ನೂ ಯಾರಿಂದ ಸಾಧ್ಯ ಆಗಿಲ್ಲ. ಯಾಕೆಂದ್ರೆ ಎಲ್ಲರು ಅನಂತ್‍ನಾಗ್ ಮತ್ತು ಲಕ್ಷ್ಮಿ ಆಗೋದಕ್ಕೆ ಆಗಲ್ಲವಲ್ಲ. 
ಮಂಜುನಾಥ್ ಹೆಚ್.ಆರ್.
email.manjunathahr1991@gmail.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ