ಬುಧವಾರ, ಜೂನ್ 1, 2016

ಮೋಜುಗಾರ ಸೊಗಸುಗಾರ




ವಿಷ್ಣುವರ್ಧನ್ ಒಬ್ಬ ಅಸಮಾನ್ಯ ನಟ, ವಿನಯ ತುಂಬಿದ ಪಾತ್ರಗಳೇ ಇರಲಿ, ರೋಷ ತುಂಬಿದ ಪಾತ್ರಗಳೇ ಇರಲಿ, ಯಾವುದಾದರೂ ಜೀವ ತುಂಬಿ ಅಭಿನಯಿಸುವಂತಹ ಪಾತ್ರ ವಿಷ್ಣುವರ್ಧನ್‍ರದ್ದು. ಆದ್ದರಿಂದಲೇ ಕನ್ನಡಿಗರ ಹೃದಯದಲ್ಲಿ ಹೃದಯವಂತನಾಗಿ, ಅಭಿಮಾನಿಗಳ ಮನದಲ್ಲಿ ಕರುನಾಡಿನ ಸಿಂಹನಾಗಿ ರಾರಾಜಿಸುತ್ತಿದ್ದಾರೆ ವಿಷ್ಣು. ಇವರು ನಟಿಸಿದ 150ನೇ ಚಿತ್ರ ಮೋಜುಗಾರ ಸೊಗಸುಗಾರ.
  ಕನ್ನಡ ಚಿತ್ರರಂಗದಲ್ಲಿ 1995ರಲ್ಲಿ ತೆರೆಕಂಡ ರೊಮ್ಯಾಂಟಿಕ್ ಲವ್ ಸಬ್ಜೆಕ್ಟ್ ಇರುವಂತಹ ಸಿನಿಮಾ. ಮೂಲತಹ ತೆಲುಗಿನ ಎನ್.ಟಿ.ಆರ್ ನಟಿಸಿರುವ ‘ನಮ್ಮ ರಾಮುಡು ನಮ್ಮ ಭೀಮುಡು’ ಚಿತ್ರದ ಕನ್ನಡ ಅವತರಣಿಕೆ. ಅಲ್ಲಿ 1964ರಲ್ಲಿ ತೆರೆಕಂಡು ಅದ್ಬುತ ಪ್ರದರ್ಶನವನ್ನು ಕಂಡಿತ್ತು, ಇದೇ ಸಿನಿಮಾ ‘ಮೋಜುಗಾರ ಸೊಗಸುಗಾರನಾಗಿ’ ಕನ್ನಡಲ್ಲಿ ಒಳ್ಳೆಯ ಪ್ರದರ್ಶನವನ್ನು ಕಂಡಿತ್ತು.
  ಈ ಚಿತ್ರವನ್ನು ವಿಜಯ್ ನಿರ್ದೇಶನವನ್ನು ಮಾಡಿದ್ದಾರೆ. ಈ ಚಿತ್ರದ ತಾರಾಗಣದಲ್ಲಿ ದೊಡ್ಡ ದೊಡ್ಡ ನಟರನ್ನು ಬಳಸಿಕೊಂಡು ಮಾಡಿದಂತಹ ಸಿನಿಮಾ ಇದು, ವಿಷ್ಣುವರ್ದನ್ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡರೆ. ಇವರಿಗೆ ನಟಿಯಾಗಿ ಸೋನಾಕ್ಷಿ, ಶೃತಿ ಅಭಿನಯಿಸಿದ್ದರು. ಲೋಕೇಶ್, ದೊಡ್ಡಣ್ಣ, ಜಯಂತಿ, ಪಂಡರಿಬಾಯಿ, ಸಿಹಿಕಹಿ ಚಂದ್ರು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಒಂದು ಕಡೆ ಹಳ್ಳಿಯ ಸೊಗಡು ಮತ್ತೊಂದು ಕಡೆ, ದೊಡ್ಡ ಮನೆಯಲ್ಲಿ ದುಷ್ಟರ ಕೈಗೆ ಸಿಕ್ಕಿ ನರಳುವ ಪಾತ್ರದಲ್ಲಿ ವಿಷ್ಣು ಅಭಿನಯ, ಅವರಿಗೆ ಸಾಟಿ.
  ಈ ಚಿತ್ರದ ಒಂದೂಂದು ಹಾಡಿನ ಕ್ರೆಡಿಟ್ ಸಲ್ಲಬೇಕಾದದ್ದು ಹಂಸಲೇಖ ಅವರಿಗೆ, ಯಾಕೆಂದರೆ ಈ ಚಿತ್ರಕ್ಕೂ ಕೂಡ ಸಂಗೀತ ನಿರ್ದೇಶನ ಮಾಡಿದವರು ಹಂಸಲೇಖ ಅವರೇ, ಈ ಚಿತ್ರದಲ್ಲಿ ಐದು ಹಾಡುಗಳಿವೆ ಇದರ ಸಾಹಿತ್ಯ ಬರೆದವರು ಕೂಡ ಹಂಸಲೇಖ, ಮಾನೂ, ಮಂಜುಳು ಗುರುರಾಜ್, ಲತಾ ಹಂಸಲೇಖ, ಚಿತ್ರದ ಕನ್ನಡವೇ ನಮ್ಮಮ್ಮ ಹಾಡಿಗೆ ಹಾಡನ್ನು ಹಾಡಿದ್ದಾರೆ ವಿಷ್ಣುವರ್ಧನ್.
 ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಷ್ಣುವರ್ಧನ್‍ಗೆ ಜೋಡಿಯಾಗಿ ಸೋನಾಕ್ಷಿ ಮತ್ತು ಶೃತಿ ಅಭಿನಯಿಸಿದ್ದಾರೆ, ಒಂದು ಪಾತ್ರಕ್ಕೂ ಮತ್ತೂಂದು ಪಾತ್ರಕ್ಕೂ ಅಜಗಜಾಂತರ ವ್ಯಾತ್ಯಾಸ ವಿದ್ದರು ವಿಷ್ಣು ಎರಡು ಪಾತ್ರಗಳಲ್ಲಿನ ಅಭಿನಯ ಚೆನ್ನಾಗಿ ಮೂಡಿಂದಿದೆ. ಸೋನಾಕ್ಷಿ ಮತ್ತು ಶೃತಿಯ ಅಭಿನಯ ಚಿತ್ರದಲ್ಲಿ ಮರೆಯುವ ಹಾಗಿಲ್ಲ. ಒಂದೊಳ್ಳೆಯ ಮನರಂಜನಾತ್ಮಕ ಚಿತ್ರ ಮೋಜುಗಾರ ಸೊಗಸುಗಾರ ಚಿತ್ರ. ಕಥೆ ಹಾಡುಗಳ ಮೂಲಕ ಚಿತ್ರ ಜನರನ್ನು ತಲುಪಿದ್ದಂತೂ ನಿಜ.
ಮಂಜುನಾಥ್ ಹೆಚ್.ಆರ್.
email : manjunathahr1991@gmail.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ