ಸೋಮವಾರ, ಜುಲೈ 4, 2016

ಹೃದಯ ಹಾಡಿತು


  ಅಂಬರೀಶ್ ಅಭಿನಯದ ಒಂದು ಸುಂದರ ಪ್ರೇಮ ಕಥೆ ಒಳಗೊಂಡ ಚಿತ್ರ ಹೃದಯ ಹಾಡಿತು. ತ್ರಿಕೋನ ಪ್ರೇಮ ಕಥೆಯನ್ನು ಹೊಂದಿರುವ ಈ ಚಿತ್ರ. ಮತ್ತು ಚಿತ್ರದ ಹಾಡುಗಳು ಕನ್ನಡ ಪ್ರೆಕ್ಷಕ ಎಂದಿಗೂ ಮರೆಯದಂತೆ ಮಾಡಿದೆ. ಲವ್ ಜೊತೆಗಿನ ಸೆಂಟಿಮೆಂಟ್ ಚಿತ್ರದ ಹೈಲೈಟ್ ಅಂತಾನೇ ಹೇಳ್ಬೋದು. ಅಂಬರೀಶ್ ಅಭಿನಯದ ಚಿತ್ರಗಳಲ್ಲಿ ಹೃದಯ ಹಾಡಿತು ಚಿತ್ರ ವಿಭಿನ್ನವಾದದ್ದು ಎಂದರೆ ತಪ್ಪಾಗಲಾರದು.
  ಇಂತ ಒಂದು ಕಥೆಯನ್ನು ಚಿತ್ರವನ್ನಾಗಿ ಮಾಡಿದವರು ನಿರ್ದೇಶಕ ಎಂ.ಎಸ್ ರಾಜಶೇಖರ್, ಈ ಚಿತ್ರಕ್ಕೆ ಚಿತ್ರಕಥೆಯನ್ನು ಮಾಡಿದವರು ಕನ್ನಡದ ಹೆಸರಾಂತ ಚಿತ್ರ ಸಾಹಿತಿ ಚಿ ಉದಯಶಂಕರ್, ಕಥೆಯ ವಿವಿಧ ಮಜಲುಗಳನ್ನು ತಮ್ಮ ಕಲ್ಪನಾ ಲೋಕದಲ್ಲಿ ವಿರಮಿಸುತ್ತಾ, ಉದಯಶಂಕರ್ ಚಿತ್ರ ಕಥೆಯನ್ನು ಮಾಡಿದ್ದಾರೆ. ಚಿತ್ರ ನೋಡಿದ ಪ್ರೇಕ್ಷಕನಿಗೆ ಇದರ ಅನುಭವ ಆಗುವುದಂತೂ ಕಂಡಿತ.
 ರೆಬಲ್ ಸ್ಟಾರ್ ಅಂಬರೀಶ್ ನಾಯಕ ನಟನಾಗಿ ಅಬಿನಯಿಸಿದ ಹೃದಯ ಹಾಡಿತು ಚಿತ್ರದಲ್ಲಿ ಮಾಲಶ್ರೀ ಮತ್ತು ಭವ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಅಶ್ವತ್ ಕೂಡ ಚಿತ್ರದಲ್ಲಿ ಅಭಿನಯಿಸಿ ತಮ್ಮ ನಟಾನಾ ಕೌಶಲ್ಯವನ್ನು ಮೆರೆದಿದ್ದಾರೆ. ಉಳಿದಂತೆ ಸುಂದರ್ ಕೃಷ್ಣ ಅರಸ್, ಗಿರಿಜಾ ಲೋಕೇಶ್, ಎಂ.ಎಸ್ ಉಮೇಶ್, ಬಾಲರಾಜ್ ಮೊದಲಾದವರನ್ನ ಈ ಚಿತ್ರದಲ್ಲಿ ಕಾಣಬಹುದು.
  ಇನ್ನೂ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಉಪೇಂದ್ರ ಕುಮಾರ್, ಚಿತ್ರದಲ್ಲಿ 5 ಹಾಡುಗಳಿದ್ದು ಬಹುತೇಕ ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ ಚಿ ಉದಯ ಶಂಕರ್. ಎಸ್.ಪಿ. ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್ ಜೊತೆಗೆ ಡಾ. ರಾಜ್‍ಕುಮಾರ್ ಚಿತ್ರದ ಒಂದು ಹಾಡಿಗೆ ತಮ್ಮ ಮಧುರವಾದ ಕಂಠವನ್ನು ನೀಡಿದ್ದಾರೆ. ಚಿತ್ರದ ಹಾಡುಗಳು ಸುಮಧುರವಾಗಿ ಮೂಡಿಬಂದಿವೆ.
  1991ರಲ್ಲಿ ಬಿಡುಗಡೆಯಾದ ಹೃದಯ ಹಾಡಿತು ಚಿತ್ರಕ್ಕೆ ಕರ್ನಾಟಕ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ, ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್‍ಗೆ ಸಂದಿತ್ತು ಮತ್ತು ಡಾ. ರಾಜ್ ಕುಮಾರ್ ಹಾಡಿದ ನಲಿಯುತಾ ಹೃದಯ ಹಾಡನು ಹಾಡಿದೆ ಹಾಡು ಎಲ್ಲರ ಬಾಯಲ್ಲೂ ಹರಿದಾಡುವಂತೆ ಮಾಡಿತು. ಇದೂ ಹೆಚ್ಚೂ ಪ್ರೇಕ್ಷಕರನ್ನು ಮುಟ್ಟಿತ್ತು. ಒಂದು ಯಶಸ್ವಿ ಚಿತ್ರ ಹೃದಯ ಹಾಡಿತು ಚಿತ್ರ.
  ಹೃದಯ ಹಾಡಿತು ಚಿತ್ರ ಹಾರ್ಟ್ ಪೇಷಂಟ್ ಮತ್ತು ಡಾಕ್ಟರ್ ನಡುವೆ ನಡೆಯುವ ಪ್ರೇಮ ಕಥೆ ಅದರ ಸವಿಯಾದ ದೃಶ್ಯಗಳನ್ನ  ನೋಡ್ಬೇಕು ಅಂದ್ರೆ ನೀವು ಚಿತ್ರವನ್ನೇ ನೋಡ್ಬೇಕು. 
ಮಂಜುನಾಥ್ ಹೆಚ್.ಆರ್.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ