ಶನಿವಾರ, ಜುಲೈ 2, 2016

ಮನೆ ದೇವ್ರು


  ಕೆ. ಭಾಗ್ಯರಾಜ್ ಕಥೆ ಬರೆದು ವಿ ರವಿಚಂದ್ರನ್ ಚಿತ್ರ ಕಥೆ ನಿರ್ದೇಶನವನ್ನು ಮಾಡಿದ ಚಿತ್ರ ಮನೆ ದೇವ್ರು. ಈ ಚಿತ್ರ ಸಂಪೂರ್ಣ ಕೌಟುಂಬಿಕ ಪ್ರದಾನವಾದದ್ದು. ಗಂಡ ಹೆಂಡತಿ ನಡುವಿನ ಸಣ್ಣ ವಿಚಾರವಾಗಿ ಬೇರೆಯಾಗುವ, ಗಂಡ ಹೆಂಡತಿಯರ ವಾಸ್ತವದ ಕಥೆಯನ್ನು ಬಿಂಬಿಸುತ್ತಿತ್ತು ಮನೆ ದೇವ್ರು ಚಿತ್ರ. ಈ ಚಿತ್ರದ ಈ ಹಾಡು ಮಧುರವಾಗಿದ್ದು ಕೇಳುಗರ ತಲೆ ದೂಗುವಂತೆ ಮಾಡುತ್ತದೆ.
 ಮನೆ ದೇವ್ರು ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕ ನಾಯಕನಾಗಿ ಅಭಿನಯಿಸಿದ್ರೆ ಇವರಿಗೆ ಜೋಡಿಯಾಗಿ ಸುಧಾರಾಣಿ ನಾಯಕಿಯಾಗಿ ಅಭಿನಯಿಸಿದ್ರು. ಅದು ಅಲ್ಲದೆ ಇವರು ಜೊತೆಯಾಗಿ ಅಭಿನಯಿಸಿದ ಮೊದಲ ಚಿತ್ರ ಕೂಡ ಇದು. ಇವರಲ್ಲದೆ ಕೆ.ಎಸ್. ಅಶ್ವತ್, ಟೆನ್ನಿಸ್ ಕೃಷ್ಣ, ಉಮೇಶ್, ಸತ್ಯಜಿತ್, ಕಾಶಿ ಮೊದಲಾದ ತಾರಾಗಣವನ್ನ ಚಿತ್ರದಲ್ಲಿ ನೋಡಬಹುದು. ರವಿ ಚಂದ್ರನ್ ಮತ್ತು ಹಂಸಲೇಖ ಜೋಡಿ ಅಂದ್ರೆ ಅಲ್ಲಿ ಸಂಗೀತದ ಹಬ್ಬ ಇರುತ್ತೆ, ಸುಮಧುರ ಗೀತೆಗಳ ಅನಾವರಣ ಅವರಿಂದ ಆಗುತ್ತೆ. ಸಂಗೀತದ ಮ್ಯಾಜಿಕ್ ಕಂಡಿತಾ ಆಗೋದಂತು ನಿಜ. ಮನೆ ದೇವ್ರು ಚಿತ್ರದಲ್ಲೂ ಕೂಡ ಇದೇ ರೀತಿ ಇಂಪಾದ ಗೀತೆಗಳ ಹೊನಲನ್ನ ಚೆಲ್ಲಿದ್ದಾರೆ ಹಂಸಲೇಖ ಇದಕ್ಕೆ ರವಿಚಂದ್ರನ್‍ರ ಸಾಥ್ ಕೂಡ ಇರೋದನ್ನ ಚಿತ್ರದಲ್ಲಿ ನೋಡ್ಬೋದು.
 ಇನ್ನೂ ಈ ಚಿತ್ರದಲ್ಲಿ ಇರೋದು 7 ಹಾಡುಗಳು ಒಂದಕ್ಕಿಂತ ಮತ್ತೊಂದು ವಿಭಿನ್ನ ವಿಚಿತ್ರ, ಹಾಗೂ ವಿಶೇಷವಾಗಿ ಮೂಡಿಬಂದಿವೆ. ಈ ಎಲ್ಲಾ ಹಾಡುಗಳಿಗೆ ತಮ್ಮ ಸುಮಧುರ ಕಂಠ ನೀಡಿದ್ದಾರೆ ಎಸ್.ಪಿ. ಬಾಲಸುಬ್ರಹ್ಮಣ್ಯಂ. ಇವರ ಜೊತೆಗೆ ಎಸ್ ಜಾನಕಿ, ಮಾನೋ, ಕೆ. ಎಸ್ ಚೈತ್ರ ಕೂಡ ತಮ್ಮ ಧ್ವನಿ ಗೂಡಿಸಿದ್ದಾರೆ. ಸುಮಧುರ ಹಾಡುಗಳನ್ನ ನೀಡುವುದಕ್ಕೆ ಅನುಕೂಲವನ್ನು ಮಾಡಿಕೊಟ್ಟಿದೆ.
 ಮನೆ ದೇವ್ರು ಚಿತ್ರಕ್ಕೆ ಕ್ಯಾಮರಾ ಹಿಡಿದವರು ಜಿ.ಎಸ್.ವಿ ಸಿತಾರಾಂ, ಕೌಟುಂಬಿಕ ಪ್ರದಾನ ಈ ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಮರೆಯುವ ಹಾಗಿಲ್ಲ ಹಾಗೆ ತಮ್ಮ ಜವಾಬ್ದಾರಿಯನ್ನ ನಿಭಾಯಿಸಿದ್ದಾರೆ. ಸಂಕಲನಕಾರನಾಗಿ ಕೆ. ಬಾಲು ಚಿತ್ರದ ಸಂಪೂರ್ಣ ಚಿತ್ರಣವನ್ನು ನೀಡುವಂತೆ ಮಾಡಿದ್ದಾರೆ. ಇವರೆಲ್ಲರ ಪರಿಶ್ರಮ ಮನೆ ದೇವ್ರು ಚಿತ್ರ ಎಂದರೆ ತಪ್ಪಾಗಲಾರದು. ಇದರ ಜೊತೆಗೆ ನಿರ್ದೇಶಕ ವಿ. ರವಿಚಂದ್ರನ್ ಪಾತ್ರ ಕೂಡ ಮನೋಜ್ಞವಾಗಿ ಮೂಡಿಬಂದಿದೆ.
ಮಂಜುನಾಥ್ ಹೆಚ್.ಆರ್.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ