ಶುಕ್ರವಾರ, ಜೂನ್ 3, 2016

ಸಿಂಗಪುರ್‍ನಲ್ಲಿ ರಾಜಾ ಕುಳ್ಳ



  ಪ್ರಥಮ ಬಾರಿಗೆ ಕನ್ನಡ ಚಿತ್ರವೊಂದು ವಿದೇಶದಲ್ಲಿ ಚಿತ್ರೀಕರಣಗೋಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿದಂತ ಚಿತ್ರ ಸಿಂಗಪೂರ್‍ನಲ್ಲಿ ರಾಜಾ ಕುಳ್ಳ. ಭಾರತ ಮತ್ತು ವಿದೇಶದಲ್ಲಿ ಚಿತ್ರೀಕರಣಗೊಂಡು, ಬಹುತೇಕ ಅಲ್ಲಿನ ಕಲಾವಿದರನ್ನೇ ಬಳಸಿಕೊಂಡು ಚಿತ್ರ ನಿರ್ಮಿಸಲಾಗಿತ್ತು. ಈ ಚಿತ್ರದಲ್ಲಿ ಸಿಂಗಪೂರ್ ನಗರವನ್ನು ಸುಂದರವಾಗಿ ತೋರಿಸಲಾಗಿದೆ.
   1978ರಲ್ಲಿ ತೆರೆಕಂಡ ಸಿಂಗಪೂರ್‍ನಲ್ಲಿ ರಾಜಾ ಕುಳ್ಳ, ಲವ್, ಸೆಂಟಿಮೆಂಟ್, ಜೊತೆಗೆ ಆಕ್ಷನ್ ದೃಶ್ಯಗಳನ್ನು ಒಳಗೊಂಡಿದೆ. ಸಿ.ವಿ ರಾಜೇಂದ್ರನ್ ನಿರ್ದೇಶನ ಮಾಡಿದ್ರೆ. ಎಂ.ಡಿ ಸುಂದರ್ ಕಥೆ ಮತ್ತು ಚಿತ್ರ ಕಥೆಯನ್ನು ಬರೆದಿದ್ದಾರೆ. ಈ ಚಿತ್ರ ಮೂಡಿಬಂದಿರುವುದು ದ್ವಾರಕೀಶ್ ಚೈತ್ರ ಪ್ರೊಡಕ್ಷನ್ ಕಂಪನಿಯಲ್ಲಿ, ನಿರ್ಮಾಪಕ ದ್ವಾರಕೀಶ್ ಅವರ ಸಾಹಸದಿಂದ ಚಿತ್ರ ವಿದೇಶದಲ್ಲಿ ಚಿತ್ರೀಕರಣಗೊಂಡ ಕನ್ನಡದ, ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
  ಚಿತ್ರಕ್ಕೆ ಸಂಗೀತ ನೀಡಿರೋದು ರಾಜನ್ ನಾಗೇಂದ್ರ, ಒಟ್ಟಾರೆಯಾಗಿ ನಾಲ್ಕು ಹಾಡುಗಳು ಈ ಚಿತ್ರದಲ್ಲಿವೆ. ಇಂಪಾದ ಸಂಗೀತದ ಜೊತೆಗೆ ಚಿ. ಉದಯ್ ಶಂಕರ್  ಸಾಹಿತ್ಯ ಚಿತ್ರದಲ್ಲಿ ಮೋಡಿ ಮಾಡುತ್ತೆ, ಕನ್ನಡ ಮತ್ತು ಚೀನಿ ಭಾಷೆಯ ಪದಗಳನ್ನು ಬಳಸಿಕೊಂಡು ಒಂದು ಹಾಡನ್ನು ಮಾಡಲಾಗಿದೆ. ಇದು ಆಗ ಒಂದು ಹೊಸ ಟ್ರೆಂಡ್ ಸೃಷ್ಟಿ ಮಾಡಿತ್ತು.
  ಈ ಚಿತ್ರದ ತಾರಾಗಣದ ಬಗ್ಗೆ ಹೇಳಲೇ ಬೇಕು, ಯಾಕೆಂದ್ರೆ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ, ಮಂಜುಳಾ ಮತ್ತು ಚೈನಾ ದೇಶದ ನಟಿಯೊಬ್ಬರು ಮತ್ತು ಬಹುತೇಕ ಅಲ್ಲಿನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಲೋಕನಾಥ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ವಜ್ರಮುನಿ ಮತ್ತು ತೂಗುದೀಪ ಶ್ರೀನಿವಾಸ್ ಖಳ ನಟರ ಪಾತ್ರದಲ್ಲಿ ಮಿಂಚು ಹರಿಸಿದ್ದಾರೆ.
  ಸಿಂಗಪೂರ್‍ನಲ್ಲಿ ರಾಜಾ ಕುಳ್ಳ ಹೆಸರೇ ಹೇಳುವಂತೆ ಸಿಂಗಪೂರ್‍ನಲ್ಲಿ ರಾಜ, ವಿಷ್ಣುವರ್ಧನ್ ಮತ್ತು ಕುಳ್ಳ ದ್ವಾರಕೀಶ್ ತನ್ನ ತಂದೆಗಾಗಿ ಹುಡುಕಾಟ ನಡೆಸುವ ಮತ್ತು ಅವರ ದಾರಿಯಲ್ಲಿ ಎದುರಾಗುವ ಅನೇಕ ತೊಂದರೆಗಳ ಸರಮಾಲೆಯನ್ನು ಚಿತ್ರ ಒಳಗೊಂಡಿದೆ. ಇಂತಹ ಸುಂದರ ಕಥೆಯನ್ನು ಚಿತ್ರ ಮಾಡಿದ ನಿರ್ದೇಶಕರು ಕನ್ನಡ ಚಿತ್ರರಂದಲ್ಲಿ ಕೆಲವೊಂದು ಹೊಸದನ್ನು ಸೃಷ್ಠಿ ಮಾಡಿದ್ದಾರೆ.
ಮಂಜುನಾಥ್ ಹೆಚ್.ಆರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ