ಭಾನುವಾರ, ಜೂನ್ 5, 2016

ಶಂಕರ್ ಗುರು


    ರಾಜ್‍ಕುಮಾರ್ ತ್ರಿ ಪಾತ್ರದಲ್ಲಿ ಅಂದರೆ ತಂದೆ ಇಬ್ಬರು ಮಕ್ಕಳ ಪಾತ್ರದಲ್ಲಿ ಕಾಣಿಸಿಕೊಂಡ ಚಿತ್ರ ಶಂಕರ್ ಗುರು, ಈ ಚಿತ್ರದ ದೊಡ್ಡ ಸಕ್ಸಸ್ ಅಂದ್ರೆ ಸುಮಾರು ಒಂದು ವರ್ಷಗಳವರೆಗೆ ಈ ಚಿತ್ರ ಕರ್ನಾಟಕದ ಹಲವು ಚಿತ್ರ ಮಂದಿರಗಳಲ್ಲಿ ಅದ್ದೂರಿ ಪ್ರದರ್ಶನವನ್ನು ಕಂಡಿತ್ತು. ರಾಜ್‍ಕುಮಾರ್ ಏಕ ಪಾತ್ರದಲ್ಲಿ ಅಭಿನಯಿಸಿದ ಚಿತ್ರಗಳನ್ನೇ ನೋಡುತ್ತಿದ್ದ ಕನ್ನಡ ಸಿನಿ ಪ್ರಿಯರಿಗೆ ಒಂದು ಹೊಸ ಬಗೆಯ ಚಿತ್ರ ‘ಶಂಕರ್ ಗುರು’ ಆಗಿತ್ತು.

    1978 ರಲ್ಲಿ ತೆರೆ ಕಂಡ ಶಂಕರ್ ಗುರು ಚಿತ್ರಕ್ಕೆ ನಿರ್ದೇಶನವನ್ನು ಮಾಡಿದವರು ವಿ ಸೋಮಶೇಖರ್, ಈ ಚಿತ್ರಕ್ಕೆ ಬಂಡವಾಳ ಹೂಡಿದ್ದವರು ಪಾರ್ವತಮ್ಮ ರಾಜ್‍ಕುಮಾರ್, ಚಿತ್ರದ ಮತ್ತೊಂದು ವಿಶೇಷತೆ ಅಂದ್ರೆ ಚಿ. ಉದಯ್ ಶಂಕರ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ತಂದೆ, ತಾಯಿ ಮಕ್ಕಳು, ಮತ್ತು ಅಣ್ಣ ತಮ್ಮಂದಿರ ಸಂಬಂಧ ಈ ಚಿತ್ರದಲ್ಲಿ ಅದ್ಬುತವಾಗಿ ಮೂಡಿ ಬಂದಿದೆ. ಉಳಿದಂತೆ ಚಿತ್ರದ ಕಥೆ, ಚಿತ್ರಕಥೆಯ ಬಗ್ಗೆ ಎಷ್ಟು ಮಾತನಾಡಿದರು ಕಡಿಮೆಯೇ.
    ಈ ಚಿತ್ರದಲ್ಲಿ ಡಾ. ರಾಜ್‍ಕುಮಾರ್ ಜೊತೆ 'ಕಾಂಚನ ಜಯಮಾಲ' ಕಾಣಿಸಿಕೊಂಡಿದ್ದರೆ, 'ಪದ್ಮಪ್ರಿಯ' ಚಿತ್ರ ಹಿಡಿದಿಡುವಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಉಳಿದಂತೆ ಬಾಲಕೃಷ್ಣ, ವಜ್ರಮುನಿ, ತುಗೂದೀಪ ಶ್ರೀನಿವಾಸ್ ಮತ್ತು ಉಮ ಶಿವಕುಮಾರ್ ಚಿತ್ರದಲ್ಲಿದ್ದಾರೆ. ನಿರ್ದೇಶಕ ವಿ. ಸೋಮಶೇಖರ್ ಕಥೆಗೆ ಉತ್ತಮ ನಟನಾ ತಂಡವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅನುಭವಿ ತಂಡವನ್ನು ಇಟ್ಟುಕೊಂಡು ಒಂದು ಉತ್ತಮ ಚಿತ್ರವನ್ನು ನೀಡಿದ್ದಾರೆ ನಿದೇಶಕರು.
   ಇನ್ನೂ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಉಪೇಂದ್ರ ಕುಮಾರ್ ಒಂದೊಂದು ಹಾಡಿಗೂ ವಿಭಿನ್ನವಾದ ಆಯಾಮವನ್ನ ನೀಡಿರುವುದು ಚೆನ್ನಾಗಿ ಮೂಡಿಬಂದಿದೆ. ಸಾಹಿತ್ಯ ಬರೆದವರು ಚಿ ಉದಯ ಶಂಕರ್, ಚಿತ್ರದ ಎಲ್ಲಾ ಹಾಡುಗಳಿಗೆ ದ್ವನಿ ನಿಡಿರೋದು ಡಾ ರಾಜ್‍ಕುಮಾರ್ ಇವರ ಜೊತೆಗೆ ಪಿ.ಬಿ ಶ್ರೀನಿವಾಸ್ ಮತ್ತು ವಾಣಿ ಜಯರಾಮ್ ಹಾಡಿದ್ದಾರೆ. ರಾಜ್‍ಕುಮಾರ್ ಹಾಡಿರುವ ಈ ಚಿತ್ರದ ಎಲ್ಲಾ ಹಾಡುಗಳು ಕೇಳಲು ಹಾಯ್ ಎನಿಸುತ್ವೆ.
   1978ರಲ್ಲಿ ತೆರೆ ಕಂಡ ಶಂಕರ್ ಗುರು ಚಿತ್ರ ಬರಿ ಕನ್ನಡ ಮಾತ್ರವಲ್ಲದೆ. ತಮಿಳಿನಲ್ಲಿ ‘ತ್ರಿಶೂಲಮ್’ ಹೆಸರಿನ ಮೂಲಕ ತೆರೆಂಡಿತು ಈ ಚಿತ್ರದಲ್ಲಿ  ‘ಶಿವಾಜಿ ಗಣೇಶನ್’ ನಟಿಸಿದ್ರು, ತೆಲುಗಿನಲ್ಲಿ ‘ಕುಮಾರ ರಾಜ’ ಹೆಸರಿನ ಈ ಚಿತ್ರದಲ್ಲಿ ‘ಕೃಷ್ಣ’ ನಟಿಸಿದ್ರೆ, ಹಿಂದಿಯಲ್ಲಿ ಬಿಗ್‍ಬಿ ‘ಅಮಿತಾ ಬಚ್ಚನ್’ ನಟಿಸಿದ ‘ಮಹಾನ್’ ಚಿತ್ರ ಶಿರ್ಷಿಕೆಯಡಿಯಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಶಂಕರ್ ಗುರು ಕನ್ನಡವಲ್ಲದೆ. ಇತರ ಭಾಷೆಯಲ್ಲೂ ಕೂಡ ಯಶಸ್ವಿ ಪ್ರದರ್ಶನವನ್ನು ಕಂಡಿದ್ದು ನಾವಿಲ್ಲಿ ಕಾಣ್ಬೋದು.
   1977-78ರ ಕರ್ನಾಟಕ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಪಡೆದಿತ್ತು ಈ ಚಿತ್ರದ ಸಂಕಲನಕ್ಕಾಗಿ ಉತ್ತಮ ಸಂಕಲನಕಾರ ಪ್ರಶಸ್ತಿಯನ್ನು ಭಕ್ತವತ್ಸಲ ಪಡೆದುಕೊಂಡಿದ್ರು. ಈ ಚಿತ್ರದ ಬಗ್ಗೆ ಎಷ್ಟೂ ಹೇಳಿದರೂ ಕಡಿಮೆಯೇ.
ಮಂಜುನಾಥ್ ಹೆಚ್.ಆರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ