ಗುರುವಾರ, ಜೂನ್ 9, 2016

ಬಂಗಾರದ ಮನುಷ್ಯ




  ರಾಜ್‍ಕುಮಾರ್ ಅಭಿನಯದ ಚಿತ್ರಗಳೇ ಹಾಗೆ ಒಂದಕ್ಕಿಂತ ಮತ್ತೊಂದು ವಿಭಿನ್ನ, ವಿಶೇಷ ಮತ್ತು ವಿಶಿಷ್ಟವಾಗಿ ಇರುತ್ವೆ. ಹೆಚ್ಚಾಗಿ ಕೌಟುಂಬಿಕ ಚಿತ್ರಗಳಿಗೆ ಪ್ರಾಧನ್ಯತೆ ಕೊಡುತ್ತಿದ್ದ ಕಾಲದಲ್ಲಿ. ಕೌಟುಂಬಿಕದ ಜೊತೆಗೆ ಕೃಷಿಯ ಕುರಿತಾದ ಚಿತ್ರ ಇದು. ಇಡೀ ಚಿತ್ರವನ್ನು ನೋಡಿದ ಕನ್ನಡ ಪ್ರೇಕ್ಷಕನಿಂದಾಗಿ ಆ ಚಿತ್ರ ಬರೋಬ್ಬರಿ 2 ವರ್ಷಗಳ ಕಾಲ ಥಿಯೇಟರ್‍ನಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಿದ್ದ. ಒಂದು ಉತ್ತಮವಾದ ಸಂದೇಶದ ಜೊತೆಗೆ ಮನರಂಜನೆ ನೀಡಿದ ಚಿತ್ರವೇ ಬಂಗಾರದ ಮನುಷ್ಯ. 
   ತನ್ನ ಭಾವನ ಮರಣದಿಂದ ಆರಿದ ದೀಪವನ್ನು ಮತ್ತೆ ಬೆಳಗಲು ಅಕ್ಕನ ಮನೆಗೆ ಬರುತ್ತಾನೆ ರಾಜೀವ, ಕುಟುಂಬವನ್ನ ಒಂದು ಹಂತಕ್ಕೆ ತರಲು ಶ್ರಮಪಡುವ ನಾಯಕ ರಾಜೀವನÀ ಪಾತ್ರದಲ್ಲಿ ರಾಜ್‍ಕುಮಾರ್ ಅಭಿನಯ ನಿಜಕ್ಕೂ ಕನ್ನಡ ಪ್ರೇಕ್ಷಕ ಮರೆಯುವ ಹಾಗಿಲ್ಲ. ಅಂತಹ ಅದ್ಬುತ ಚಿತ್ರ ಬಂಗಾರದ ಮನುಷ್ಯ ಚಿತ್ರದಲ್ಲಿ ರಾಜ್‍ಕುಮಾರ್ ಅಭಿನಯಿಸಿದ್ದಾರೆ. ಟಿ.ಕೆ ರಾಮ್‍ರಾವ್ ಅವರ ಕಾದಂಬರಿ ಆಧಾರಿತವಾದ ಈ ಚಿತ್ರವನ್ನು ನಿರ್ದೇಶನ ಮಾಡಿದವರು ಸಿದ್ದಲಿಂಗಯ್ಯ ಒಂದು ಉತ್ತಮ ಚಿತ್ರ ಕಥೆಯನ್ನು ಮಾಡಿಕೊಂಡು. ತಮ್ಮ ಜವಾಬ್ದಾರಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ್ದಾರೆ.
  ರಾಜ್‍ಕುಮಾರ್ ರಾಜೀವನ ಪಾತ್ರ ಮತ್ತು ಭಾರತಿ ಲಕ್ಷ್ಮಿಯ ಪಾತ್ರದಲ್ಲಿ ಅದ್ಬುತವಾದ ನಟನೆಯನ್ನು ಮಾಡಿದ್ದಾರೆ. ಹಳ್ಳಿ ಸೊಗಡಿನ ಹೆಣ್ಣಾಗಿ ಕಾಣಿಸಿಕೊಂಡಿರುವ ಭಾರತಿ ರಾಜ್‍ಕುಮಾರ್‍ಗೆ ಅದ್ಬುತ ಜೋಡಿ. ಇವರಿಬ್ಬರ ಕಾಂಬಿನೇಷನಲ್ಲಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಉಳಿದಂತೆ ವಜ್ರಮುನಿ, ಎಂ.ಪಿ ಶಂಕರ್, ಆರತಿ, ಬಾಲಕೃಷ್ಣ, ಶ್ರೀನಿವಾಸ್ ಮೊದಲಾದ ತಾರ ಬಳಗ ಚಿತ್ರಕ್ಕೆ ದುಡಿದಿದ್ದಾರೆ. ಇವರೆಲ್ಲರ ಉತ್ತಮವಾದ ಅಭಿನಯ ಚಿತ್ರದ ಯಶಸ್ಸಿಗೆ ಕಾರಣ ಎಂದರೆ ತಪ್ಪಾಗಲಾರದು.
  ಈ ಚಿತ್ರದ ಹಾಡುಗಳನ್ನ ಎಷ್ಟು ಕೇಳಿದರು ಕೇಳಬೇಕೆನ್ನಿಸುವ ಮನಸ್ಸಿಗೆ ಹಿತವೆನ್ನಿಸುವ ಸಂಗೀತ ಚಿತ್ರಕ್ಕಿದೆ. ಅದು ಜಿ.ಕೆ ವೆಂಕಟೇಶ್‍ರ ಕೈ ಚಳಕ ಅಂತಾನೇ ಹೇಳ್ಬೋದು. ಚಿತ್ರದಲ್ಲಿ ಐದು ಹಾಡುಗಳಿವೆ ಹುಣಸೂರು ಕೃಷ್ಣ ಮೂರ್ತಿ, ಆರ್ ಎನ್ ಜಯಗೋಪಾಲ್, ಚಿ ಉದಯ ಶಂಕರ್ ಮತ್ತು ವಿಜಯ ನಾರಸಿಂಹ ಸಾಹಿತ್ಯವನ್ನ ಬರೆದರೆ, ಪಿ.ಬಿ ಶ್ರೀನಿವಾಸ್, ಪಿ.ಸುಶೀಲ, ಮತ್ತು ಎಸ್.ಬಿ. ಬಾಲಸುಬ್ರಹ್ಮಣ್ಯಂ ಸಾಹಿತ್ಯಕ್ಕೆ ದ್ವನಿಯನ್ನು ನೀಡಿದ್ದರೆ. ಇವರಿಂದಾಗಿ ಚಿತ್ರ ಒಂದು ಹೆಜ್ಜೆ ಮುಂದೆ ಹೋಗಿದೆ.
ಕೌಟುಂಬಿಕ, ಮನರಂಜನೆಯ ಜೊತೆಗೆ ಸಂದೇಶವನ್ನು ಸಾರುವ ಈ ಚಿತ್ರಕ್ಕೆ ಅನೇಕ ಪ್ರಶಸ್ತಿಗಳ ಗರಿ ಮುಡಿಗೇರಿದೆ. 1971-72ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ, ಎರಡನೇ ಅತ್ಯುತ್ತಮ ಚಿತ್ರ, ಈ ಚಿತ್ರದಲ್ಲಿ ಅಭಿನಯಿಸಿದ ಬಾಲಕೃಷ್ಣರವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಚಿತ್ರಕಥೆಗಾಗಿ ಸಿದ್ದಲಿಂಗಯ್ಯನವರಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ, ಡಿ.ವಿ ರಾಜಾರಾಮ್‍ರಿಗೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ, ಸಂಕಲನಕ್ಕಾಗಿ ಪಿ. ಭಕ್ತವತ್ಸಲಂರಿಗೆ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಲಭಿಸಿವೆ. 1972ರ ಅತ್ಯುತ್ತಮ ಚಿತ್ರಗಳಲ್ಲೊಂದು ಬಂಗಾರದ ಮನುಷ್ಯ ಬಂಗಾರದ ಮನುಷ್ಯ ಒಂದು ಕೃಷಿ ಬದುಕಿನ ಚಿತ್ರಣವನ್ನು ತೆರೆದಿಡುವ ಒಂದು ಸ್ಪೂರ್ತಿದಾಯಕ ಚಿತ್ರ. ಇಂತ ಚಿತ್ರವನ್ನ ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು. 
                                                                      ಮಂಜುನಾಥ ಹೆಚ್.ಆರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ